ಬೊಜ್ಜು ಕರಗಿಸುವ ಆಹಾರಗಳು ನಾವು ಸೇವಿಸುವ ಆಹಾರಗಳ, ಅದರಲ್ಲೂ ವಿಶೇಶವಾಗಿ ಎಣ್ಣೆಗಳ ಮೂಲಕ ದೇಹಕ್ಕೆ ಆಗಮಿಸುವ ಕೊಲೆಸ್ಟ್ರಾಲ್ ಗಳಲ್ಲಿ ಎರಡೂ ರೀತಿಯವು ಇರುತ್ತವೆ. ಆದರೆ ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಬಳಕೆಯಾಗಿ ವಿಸರ್ಜನೆಗೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಮಾತ್ರ ರಕ್ತದ ಮೂಲಕ ರಕ್ತನಾಳಗಳ ಒಳಗೆ ಹರಿಯುತ್ತಾ ಕವಲು, ತಿರುವುಗಳಿರುವ ಮೂಲೆಗಳಲ್ಲಿ ಅಂಟಿ ಕೊಂಡುಬಿಡುತ್ತದೆ. ಹೀಗೇ ವರ್ಷಗಟ್ಟಲೆ ಸಂಗ್ರಹವಾಗುವ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗಣ ವ್ಯಾಸವನ್ನು ಕಿರಿದುಗೊಳಿಸುತ್ತಾ ಅದರ ಮೂಲಕ ರಕ್ತ ಹರಿಯಲು ಅಡ್ಡಿಪಡಿಸುತ್ತದೆ. ಹೃದಯಕ್ಕೆ ಇದರ ಮೂಲಕ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಪರಿಣಾಮ: ಹೃದಯಾಘಾತ ಮತ್ತು ಹೃದಯಸಂಬಂಧಿ ಕಾಯಿಲೆಗಳ ಆಗಮನ. ಬೊಜ್ಜು ನಿಯಂತ್ರಸಲು, ಎಲೆ ಕೋಸು, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು. ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ. ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ. ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, ೨-೩ ಬಾರಿ ತರಕಾರಿಗಳು, ೨-೪ ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ. ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನ...