ಬೊಜ್ಜು ಕರಗಿಸುವ ಆಹಾರಗಳು


ನಾವು ಸೇವಿಸುವ ಆಹಾರಗಳ, ಅದರಲ್ಲೂ ವಿಶೇಶವಾಗಿ ಎಣ್ಣೆಗಳ ಮೂಲಕ ದೇಹಕ್ಕೆ ಆಗಮಿಸುವ ಕೊಲೆಸ್ಟ್ರಾಲ್ ಗಳಲ್ಲಿ ಎರಡೂ ರೀತಿಯವು ಇರುತ್ತವೆ. ಆದರೆ ಇದರಲ್ಲಿ ಉತ್ತಮ ಕೊಲೆಸ್ಟ್ರಾಲ್ ಬಳಕೆಯಾಗಿ ವಿಸರ್ಜನೆಗೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಮಾತ್ರ ರಕ್ತದ ಮೂಲಕ ರಕ್ತನಾಳಗಳ ಒಳಗೆ ಹರಿಯುತ್ತಾ ಕವಲು, ತಿರುವುಗಳಿರುವ ಮೂಲೆಗಳಲ್ಲಿ ಅಂಟಿ ಕೊಂಡುಬಿಡುತ್ತದೆ.

ಹೀಗೇ ವರ್ಷಗಟ್ಟಲೆ ಸಂಗ್ರಹವಾಗುವ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗಣ ವ್ಯಾಸವನ್ನು ಕಿರಿದುಗೊಳಿಸುತ್ತಾ ಅದರ ಮೂಲಕ ರಕ್ತ ಹರಿಯಲು ಅಡ್ಡಿಪಡಿಸುತ್ತದೆ. ಹೃದಯಕ್ಕೆ ಇದರ ಮೂಲಕ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಪರಿಣಾಮ: ಹೃದಯಾಘಾತ ಮತ್ತು ಹೃದಯಸಂಬಂಧಿ ಕಾಯಿಲೆಗಳ ಆಗಮನ.




ಬೊಜ್ಜು ನಿಯಂತ್ರಸಲು, ಎಲೆ ಕೋಸು, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು.
 ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ. 
ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ.


ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, ೨-೩ ಬಾರಿ ತರಕಾರಿಗಳು, ೨-೪ ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ. 


ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನು ಕಡೆಗಣಿಸಿ. ನೀವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಮತ್ತು ನಿಮ್ಮ ಆಹಾರದಲ್ಲಿ ಕಾರ್ಬ್ ಪ್ರಮಾಣ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.ಬ್ರೌನ್ ಬ್ರೆಡ್, ಕಂದು ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.


ನಿಮ್ಮ ಆಹಾರದಲ್ಲಿ ನಾರು ಹೆಚ್ಚಿದ್ದಷ್ಟೂ ಜೀರ್ಣಶಕ್ತಿ ಉತ್ತಮಗೊಳ್ಳುವುದು, ಮಲಬದ್ಧತೆಯಾಗದೇ ಇರುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳ್ಳುವುದು. 

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಕಿತ್ತಳೆ ರಸ/ನಿಂಬೆ ರಸ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಬಹುದು. ಬೆಳಿಗ್ಗೆ ಪ್ರಥಮವಾಗಿ ಕುಡಿಯುವುದರಿಂದ ಮತ್ತು ಬೇರೇನನ್ನೂ ಸೇವಿಸದಿರುವುದರಿಂದ ಹೊಟ್ಟೆಯ ಮೂಲಕ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ರಕ್ತಸೇರಿ ಅತಿವೇಗದಲ್ಲಿ ದೇಹದ ಇತರೆಡೆ ಹರಡುತ್ತವೆ. 
ಈ ಪೋಷಕಾಂಶಗಳು ತೀಕ್ಷ್ಣವಾಗಿರುವುದರಿಂದ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲ ಮಾಡುತ್ತಾ ಹೋಗುತ್ತವೆ.
 ಹೀಗೇ ದಿನೇದಿನೇ ಕೊಂಚಕೊಂಚವಾಗಿ ಸಡಿಲಗೊಳ್ಳುವ ಕೊಲೆಸ್ಟ್ರಾಲ್ ರಕ್ತದ ಮೂಲಕ ಹರಿದು ಬಳಿಕ ವಿಸರ್ಜನೆಗೊಳ್ಳುತ್ತದೆ. ಆದ್ದರಿಂದ ಸತತವಾಗಿ ಒಂದೆರಡು ತಿಂಗಳಾದರೂ ಸೇವಿಸುವುದು ಉತ್ತಮ. ಇದಕ್ಕೆ ಸಿದ್ದರೂಪದ ಪ್ಯಾಕ್ ಗಿಂತಲೂ ಈಗತಾನೇ ಕಿತ್ತಳೆಹಣ್ಣುಗಳನ್ನು ಹಿಂಡಿ ತೆಗೆದ ರಸವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ.






Comments

Popular posts from this blog